ದೇಶ

ಮಹಾಕುಂಭಮೇಳಕ್ಕೆ ಸಂತರ ʼಅಖಾಡʼ ಎಂಟ್ರಿ..! ನಿನ್ನೆ 60 ಲಕ್ಷ ಮಂದಿ ಭೇಟಿ..!

ಸಂತರು, ಸಾಧುಗಳು, ವಿದ್ವಾಂಸರು, ಹಠಯೋಗಿ, ನಾಗಾ ಸಾಧುಗಳು, ಅಘೋರಿಗಳು, ಕಾಪಾಲಿಕರು ಹೀಗೆ ಸಾಧುಪರಂಪರೆಯಲ್ಲಿ ವಿಶಿಷ್ಟ ಸಾಧನೆಗೆ ಮುಂದಾಗಿರುವ ಸಂತರ ಗುಂಪುಗಳನ್ನೇ ಅಖಾಡ ಎನ್ನುತ್ತೇವೆ..

ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಮಹಾಕುಂಭಮೇಳದ ಮೊದಲ ಅಮೃತಸ್ನಾನವು ವಿವಿಧ ಅಖಾಡಗಳ ಸಾಧುಗಳೊಂದಿಗೆ ಪ್ರಾರಂಭವಾಗಿದೆ.. ಪ್ರತೀ ಕುಂಭಮೇಳವನ್ನು ಆಯಾ ಅಖಾಡಗಳು ನೇತೃತ್ವ ವಹಿಸುತ್ತವೆ.. ಸಂತರು, ಸಾಧುಗಳು, ವಿದ್ವಾಂಸರು, ಹಠಯೋಗಿ, ನಾಗಾ ಸಾಧುಗಳು, ಅಘೋರಿಗಳು, ಕಾಪಾಲಿಕರು ಹೀಗೆ ಸಾಧುಪರಂಪರೆಯಲ್ಲಿ ವಿಶಿಷ್ಟ ಸಾಧನೆಗೆ ಮುಂದಾಗಿರುವ ಸಂತರ ಗುಂಪುಗಳನ್ನೇ ಅಖಾಡ ಎನ್ನುತ್ತೇವೆ.. ಸಂತರ ಈ ಅಖಾಡವು ಕುಂಭ ಪ್ರವೇಶಿಸುವುದೇ ವೈಭೋಗ, ಕುದುರೆ, ರಥಗಳ ಮೇಲೇರಿ ಸಾಧುಗಳು ಕುಂಭ ಪ್ರವೇಶಿಸುತ್ತಿದ್ದಾರೆ.. ನಿರಂಜನಿ ಮತ್ತು ಆನಂದ್ ಅಖಾಡಗಳ ನಾಗಾ ಸಾಧುಗಳು 'ಅಮೃತ ಸ್ನಾನ'ಕ್ಕೆ ತೆರಳಿದ್ದಾರೆ.. ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಕುಂಭಮೇಳ ನಡೆಯುತ್ತಿದೆ.. ಮೊದಲ ದಿನವಾದ ನಿನ್ನೆ ಬರೋಬ್ಬರಿ 60 ಲಕ್ಷಕ್ಕೂ ಅಧಿಕ ಮಂದಿ ಪವಿತ್ರಸ್ನಾನ ಮಾಡಿದ್ದಾರೆ.. ದೇಶದಾದ್ಯಂತ ಮಾತ್ರವಲ್ಲದೇ ವಿದೇಶಗಳಿಂದಲೂ ಭಕ್ತರು ಆಗಮಿಸಿದ್ದಾರೆ..